ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ನಿಮ್ಮ ಫೋನಿನಲ್ಲಿ ನೀವು ಇನ್ಸ್ಟಾಲ್ ಮಾಡಲೇಬಾರದ 8 ಅಪಾಯಕಾರಿ ಆ್ಯಪ್ ಗಳಿವು!


ಈ ದಿನಗಳಲ್ಲಿ ಮೊಬೈಲ್ ಫೋನ್ ಬಳಸದವರಿಲ್ಲ. ಬಹುತೇಕ ಎಲ್ಲರೂ ಮೊಬೈಲ್ ಫೋನ್ ಬಳಸುತ್ತಾರೆ. ಅದರಲ್ಲೂ ಹೆಚ್ಚಿನವರ ಕೈಗಳಲ್ಲಿ ಆ್ಯಂಡ್ರಾಯಿಡ್ ಫೋನ್ ಇರುತ್ತವೆ. ಕೈಲೊಂದು ಆ್ಯಂಡ್ರಾಯಿಡ್ ಫೋನ್ ಇದ್ದರೆ ಮುಗೀತು; ಆ ಮೇಲೆ ಒಂದಿಲ್ಲೊಂದು ಕಾರಣಕ್ಕಾಗಿ ನಾವು ಬೇರೆ ಬೇರೆ ಆ್ಯಪ್ ಗಳನ್ನು ಇನ್ ಸ್ಟಾಲ್ ಮಾಡಿಕೊಳ್ಳುತ್ತೇವೆ. ಪ್ಲೇ ಸ್ಟೋರ್ ನಲ್ಲಿ ಲಕ್ಷಾಂತರ ಆ್ಯಪ್ ಗಳು ಸಿಗುವುದರಿಂದ ಅವುಗಳ ಬಗ್ಗೆ ಹೆಚ್ಚು ಗೊತ್ತಿಲ್ಲದ ನಾವು ಬೇಕೆನಿಸಿದ ಯಾವ್ ಯಾವುದೋ ಆ್ಯಪ್ ಗಳನ್ನು ನಮ್ಮ ಮೊಬೈಲ್ ನಲ್ಲಿ ಇನ್ ಸ್ಟಾಲ್ ಮಾಡಿಕೊಳ್ಳುತ್ತೇವೆ. ಹೀಗೆ ಇನ್ ಸ್ಟಾಲ್ ಮಾಡಿಕೊಂಡ ಆ್ಯಪ್ ಗಳಲ್ಲಿ ಅಪಾಯಕಾರಿ ಆ್ಯಪ್ ಗಳು ಇದ್ದರೂ ನಮಗದು ಗೊತ್ತಾಗುವುದಿಲ್ಲ. ಗೊತ್ತಾಗುವ ಹೊತ್ತಿಗೆ ಅನಾಹುತ ಸೃಷ್ಟಿಯಾಗಿರತ್ತೆ.

ಹೀಗಾಗಿ ಪ್ಲೇ ಸ್ಟೋರ್ ಅಥವಾ ಇನ್ಯಾವುದೋ ಮೂಲಗಳಿಂದ ಆ್ಯಪ್ ಗಳನ್ನು ಇನ್ ಸ್ಟಾಲ್ ಮಾಡಿಕೊಳ್ಳುವ ಮುನ್ನ ಎಚ್ಚರ ವಹಿಸಲು ಮತ್ತು ಈಗಾಗಲೇ ಇನ್ ಸ್ಟಾಲ್ ಮಾಡಿಕೊಂಡಿದ್ದರೂ ಕೂಡಲೇ ಮೊಬೈಲ್ ನಿಂದ ತೆಗೆದು ಹಾಕಲು ಸಹಾಯವಾಗಲಿ ಎಂದು ಇಲ್ಲಿ ಕೆಲವೊಂದು ಅಪಾಯಕಾರಿ ಆ್ಯಪ್ ಗಳ ಬಗ್ಗೆ ಮಾಹಿತಿ ನೀಡಿದ್ದೇವೆ.

1. ಯುಸಿ ಬ್ರೌಸರ್ (UC Browser) 
ಯುಸಿ ಬ್ರೌಸರ್ ಅನ್ನು UCWeb ಅಭಿವೃದ್ಧಿಪಡಿಸಿದೆ. ಚೈನೀಸ್ ದೈತ್ಯ ಟೆಕ್ ಕಂಪನಿ ‘ಆಲಿಬಾಬ’ದ ಸಹ ಬ್ರೌಸರ್ ಇದು. ಯುಸಿ ಬ್ರೌಸರ್ ಜಗತ್ತಿನ ಹೆಚ್ಚು ಆ್ಯಂಡ್ರಾಯಿಡ್ ಫೋನ್ ಗಳಲ್ಲಿ ಡೌನ್ ಲೋಡ್ 
ಆಗಿರುವ ವೆಬ್ ಬ್ರೌಸರ್. ಸೈಬರ್ ಸೆಕ್ಯೂರಿಟಿ ವಿಶ್ಲೇಷಕರು ಹೇಳುವ ಪ್ರಕಾರ ಇದು ತನ್ನ ಡೇಟಾ ರವಾನೆಗಳನ್ನು ಸಮರ್ಪಕವಾಗಿ ರಕ್ಷಿಸುವುದಿಲ್ಲ. ಅಂದರೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹ್ಯಾಕರ್ ಗಳು ಅಥವಾ ಗುಪ್ತಚರ ಏಜೆನ್ಸಿಗಳು ಬಳಸಿಕೊಳ್ಳುವ ಅಪಾಯವಿರಬಹುದು. ಸಂಶೋಧಕರ ಪ್ರಕಾರ, ಯುಸಿ ಬ್ರೌಸರ್ ನಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸುವಲ್ಲ ದುರ್ಬಲವಾಗಿರುತ್ತದೆ.
ಬೇರೆ ಯಾವ ಆ್ಯಪ್ ಗಳು ಬಳಸಬಹುದು?: Mozilla Firefox (Free), Google Chrome (Free), DuckDuckGo Browser (Free).

2. ಕ್ಲೀನ್ ಇಟ್ (CLEANit)

ತಾನೊಂದು ಜಂಕ್ ಫೈಲ್ ಕ್ಲೀನರ್ ಆ್ಯಪ್ ಎಂದು ಕ್ಲೀನ್ ಇಟ್ ಹೇಳಿಕೊಳ್ಳುತ್ತದೆ. ಪ್ಲೇ ಸ್ಟೋರ್ ನಲ್ಲಿ ಈ ಆ್ಯಪ್ ಅನ್ನು ಲಕ್ಷಾಂತರ ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಈ ಅಪ್ಲಿಕೇಶನ್ ಇನ್ ಸ್ಟಾಲ್ ಮಾಡಿಕೊಂಡ ಬಳಿಕ ಇದು ಕಾರ್ಯ ನಿರ್ವಹಿಸಲು ನಿಮ್ಮ ಫೋನಿನ ಬಹಳಷ್ಟು ಪರ್ಮೀಶನ್ ಗಳನ್ನು ಕೇಳುತ್ತದೆ. ಅಷ್ಟೇ ಅಲ್ಲ, ನಿಮಗೆ ಬೇಡದ ಜಾಹೀರಾತುಗಳನ್ನು ನೀಡುತ್ತದೆ. ಇವುಗಳಲ್ಲಿ ಹೆಚ್ಚಿನ ಸೇವೆಗಳು ನಿಮ್ಮ ಫೋನಿಗೆ ಅಪಾಯಕಾರಿಯಾಗಿರಬಹುದು.
ಬೇರೆ ಯಾವ ಆ್ಯಪ್ ಗಳು ಬಳಸಬಹುದು?: Greenify (Free), CCleaner (Free)

3. ಡಾಲ್ಫಿನ್ ಬ್ರೌಸರ್ (Dolphin Browser)
ಜಗತ್ತಿನಲ್ಲಿ ಹೆಚ್ಚು ಜನಪ್ರಿಯವಾಗಿರುವ ಥರ್ಡ್ ಪಾರ್ಟಿ ವೆಬ್ ಬ್ರೌಸರ್ ಗಳಲ್ಲಿ ಡಾಲ್ಫಿನ್ ಬ್ರೌಸರ್ ಕೂಡ ಒಂದು. ಈ ಬ್ರೌಸರ್ ಬಳಕೆದಾರರಿಗೆ ಬಹಳಷ್ಟು ಭರವಸೆಗಳನ್ನು ನೀಡುತ್ತದೆ, ಆದರೆ ಆ ಭರವಸೆಗಳಲ್ಲಿ ಎಲ್ಲವನ್ನೂ ಪಾಲಿಸುವುದಿಲ್ಲ. ಇದೊಂದು ಫ್ಲ್ಯಾಶ್ ಬೆಂಬಲಿತ ಬ್ರೌಸರ್ ಆಗಿದ್ದು 
ಇದು ನಿಮ್ಮನ್ನು ಟ್ರ್ಯಾಕ್ ಮಾಡಲೂಬಹುದು. ಹೀಗಾಗಿ ಈ ಬ್ರೌಸರ್ ಅನ್ನು ನೀವೀಗಾಗಲೇ ಇನ್ ಸ್ಟಾಲ್ ಮಾಡಿಕೊಂಡಿದ್ದರೆ ಕೂಡಲೇ ಅನ್ ಇನ್ ಸ್ಟಾಲ್ ಮಾಡಿ. ಕೆಲವಾರು ವರ್ಷಗಳಿಂದ ಬರುತ್ತಿರುವ ವರದಿಗಳ ಪ್ರಕಾರ, ಈ ಡಾಲ್ಫಿನ್ ಬ್ರೌಸರ್ ನಿಮ್ಮ ಇನ್ ಕಾಗ್ನಿಟೋ (ಅಜ್ಞಾತ) ಬ್ರೌಸಿಂಗ್ ಸೆಶನ್ ಅನ್ನು ಉಳಿಸಿಕೊಳ್ಳುವುದಲ್ಲದೆ ನೀವು ವಿಪಿಎನ್ ಬಳಸಿದ್ದರೂ ಕೂಡ ನಿಮ್ಮ ಐಪಿ ಅಡ್ರೆಸ್ ಅನ್ನು ಬಹಿರಂಗಪಡಿಸುತ್ತದೆ. ಈ ಬ್ರೌಸರ್ ನಲ್ಲಿ ವೀಡಿಯೋ ಪ್ಲೇಯರ್ಸ್, ಸ್ಪೀಡ್ ಬೂಸ್ಟರ್ ಹೀಗೆ ಹೆಚ್ಚುವರಿ ಫೀಚರ್ ಗಳಿರುತ್ತವೆ. ಆದರೂ ಈ ಆ್ಯಪ್ ಒಳ್ಳೆಯದಲ್ಲ.
ಇದಕ್ಕೆ ಬದಲು ಯಾವ ಆ್ಯಪ್ ಗಳು ಬಳಸಬಹುದು?: Mozilla Firefox, Google Chrome, DuckDuckGo Browser

4. ವೈರಸ್ ಕ್ಲೀನರ್ (Virus Cleaner – Antivirus Free & Phone Cleaner)

ಜಗತ್ತಿನಾದ್ಯಂತ ಈ ಆ್ಯಪ್ ಅನ್ನು 140 ಲಕ್ಷ ಜನ ಇನ್ ಸ್ಟಾಲ್ ಮಾಡಿಕೊಂಡಿದ್ದಾರೆ. Virus Cleaner – Antivirus Free & Phone Cleaner ಆ್ಯಪ್ ಅನ್ನು ಸೂಪರ್ ಕ್ಲೀನರ್ ಸ್ಟುಡಿಯೋ ಹೊರ ತಂದಿದೆ. ಈ ಆ್ಯಪ್ ಇನ್ ಸ್ಟಾಲ್ ಮಾಡಿಕೊಂಡರೆ ಹಲವಾರು ಜಾಹಿರಾತುಗಳು ಕಾಣಿಸಿಕೊಳ್ಳುತ್ತಿರುತ್ತವೆ. ಇದು ನಮ್ಮ ಆ್ಯಂಡ್ರಾಯಿಡ್ ಫೋನ್ ಗೆ ಒಳ್ಳೆಯದಲ್ಲ. ಕಾರಣ, ಈ ಆ್ಯಪ್ ನಿಂದ ಬರುವ ಜಾಹೀರಾತು-ಸೇವೆಗಳು ಪ್ರರ್ಶ್ನಾರ್ಥ ರೀತಿಯಲ್ಲಿರುತ್ತವೆ. ಫೋನ್ ಗೆ ಸುರಕ್ಷತೆ ನೀಡುವುದಾಗಿ, ಜಂಕ್ ಕ್ಲೀನ್ ಮಾಡುವುದಾಗಿ, ವೈಫೈ ಸುರಕ್ಷತೆ ಒದಗಿಸುವುದಾಗಿ, ಫೋನ್ ಬೂಸ್ಟ್ ಮಾಡುವುದಾಗಿ, ಬ್ಯಾಟರಿ ಸೇವರ್, ಸಿಪಿಯು ಕೂಲರ್ ಆಗಿ ಆ್ಯಪ್ ಹಲವಾರು ಭರವಸೆಗಳನ್ನು ನೀಡುತ್ತದೆ. ಆದರೆ ಇವು ಯಾವುದೂ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. 
ಇದಕ್ಕೆ ಬದಲು ಯಾವ ಆ್ಯಪ್ ಗಳು ಬಳಸಬಹುದು?: Avast (Free), AVG (Free), Kaspersky (Free).

5. ಸೂಪರ್ ವಿಪಿಎನ್ ಫ್ರೀ ವಿಪಿಎನ್ ಕ್ಲಿಯೆಂಟ್ (SuperVPN Free VPN Client)
ಸೂಪರ್ ವಿಪಿಎನ್ ಆ್ಯಪ್ ಅನ್ನು ಜಗತ್ತಿನಲ್ಲಿ ಸುಮಾರು 100 ಮಿಲಿಯನ್ (10 ಕೋಟಿ) ಜನ ತಮ್ಮ 
ಆ್ಯಂಡ್ರಾಯಿಡ್ ಫೋನ್ ಗಳಲ್ಲಿ ಇನ್ ಸ್ಟಾಲ್ ಮಾಡಿಕೊಂಡಿದ್ದಾರೆ. ಸೈಬರ್ ಸೆಕ್ಯೂರಿಟಿ ವಿಶ್ಲೇಶಕರ ಪ್ರಕಾರ ಈ ಆ್ಯಪ್ ನಿರ್ಣಾಯಕ ದೌರ್ಬಲ್ಯವನ್ನು ಹೊಂದಿದೆ. ಅಂದರೆ ಈ ಆ್ಯಪ್ ಮೂಲಕ ನಿಮ್ಮ ಫೋನ್ ಗೆ ಹ್ಯಾಕರ್ ಗಳು ಪ್ರವೇಶಿಸಬಹುದು. ಈ ಆ್ಯಪ್ ಮೂಲಕ ಹ್ಯಾಕರ್ ಗಳು ದಾಳಿ ಮಾಡಬಹುದು, ನಿಮ್ಮ ಮಾಹಿತಿಯನ್ನು ಕದಿಯಬಹುದು. ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿ, ಫೋಟೋಗಳು ಮತ್ತು ವೈಯಕ್ತಿಕ ಚಾಟ್ ಅನ್ನು ಹ್ಯಾಕರ್ ಗಳು ಕದಿಯುವ ಸಾಧ್ಯತೆಯಿರುತ್ತದೆ. 
ಇದಕ್ಕೆ ಬದಲು ಯಾವ ಆ್ಯಪ್ ಗಳು ಬಳಸಬಹುದು?: Express VPN (Free), Nord VPN (Free), SurfShark (Free)

6. ಆರ್.ಟಿ. ನ್ಯೂಸ್ (RT News)

ಆರ್.ಟಿ. ನ್ಯೂಸ್ ಆ್ಯಪ್ ಅನ್ನು ರಷ್ಯಾ ಟುಡೇಯ ಕ್ರೆಮ್ಲಿನ್ ಅವರು ಸ್ಥಾಪಿಸಿದ್ದಾರೆ. ರಷ್ಯಾ ಸರ್ಕಾರದ ಅಧಿಕೃತ ಮುಖವಾಣಿ ಆಗಿರುವ ರಷ್ಯಾ ಟುಡೇ ನೆಟ್ವರ್ಕ್ ಬಳಕೆದಾರರಿಗೆ ಇಂಗ್ಲೀಷಿನಲ್ಲಿ ನ್ಯೂಸ್ ಚಾನೆಲ್, ಬ್ಲಾಗ್ ಗಳು ಮತ್ತು ವಿವಿಧ ಆ್ಯಪ್ ಗಳನ್ನು ನೀಡುತ್ತದೆ. ಈ ನೆಟ್ವರ್ಕ್ ಹೆಚ್ಚಿನ ಸಾರಿ ವ್ಲಾಡಿಮೀರ್ ಪುಟಿನ್ ಸರ್ಕಾರದ ಪ್ರಚಾರಕ್ಕೆ ಬಳಕೆಯಾಗುತ್ತದೆ. ಅಂದರೆ ಇದು ವಿದೇಶಿ ಭದ್ರತೆಯ ಏಜೆನ್ಸಿಗಳಾದ ಸಿಐಎ, ಎಂ16ಗಳಿಗೆ ಕೆಲಸ ಮಾಡುತ್ತದೆ. ಹೀಗಾಗಿ ನೀವು ಈ ಆ್ಯಪ್ ನಿಂದಲೂ ದೂರ ಇರುವುದು ಒಳಿತು.
ಇದಕ್ಕೆ ಬದಲು ಯಾವ ಆ್ಯಪ್ ಗಳು ಬಳಸಬಹುದು?: CNN (Free), BBC (Free)

7. ಸೂಪರ್ ಕ್ಲೀನ್-ಮಾಸ್ಟರ್ ಆಫ್ ಕ್ಲೀನ್ (Super Clean – Master of Cleaner)
ಸೂಪರ್ ಕ್ಲೀನ್ ಕೂಡ ಇನ್ನೊಂದು ಕ್ಲೀನರ್ ಆ್ಯಪ್. ಜನಪ್ರಿಯ ಆ್ಯಪ್ ಇದಾಗಿರುವುದರಿಂದ ಇದನ್ನು ಕೂಡ ಬಹಳಷ್ಟು ಜನ ಇನ್ ಸ್ಟಾಲ್ ಮಾಡಿಕೊಂಡಿರುವ ಸಾಧ್ಯತೆಗಳಿವೆ. ಮ್ಯಾಜಿಕಲ್ ಡೆವ್ 
ಅಭಿವೃದ್ಧಿಪಡಿಸಿರುವ ಈ ಆ್ಯಪ್ ಅನ್ನು ಜಗತ್ತಿನಲ್ಲಿ 26 ಮಿಲಿಯನ್ (2.60 ಕೋಟಿ) ಜನ ಇನ್ ಸ್ಟಾಲ್ ಮಾಡಿಕೊಂಡಿದ್ದಾರೆ. ಈ ಆ್ಯಪ್ ಕೂಡ ನಿಮ್ಮ ಫೋನಿನ ಬ್ಯಾಟರಿ ಸಾಮರ್ಥ್ಯ ಹೆಚ್ಚಿಸುವುದಾಗಿ, ಜಂಕ್ ಫೈಲ್ ಕ್ಲೀನ್ ಮಾಡುವುದಾಗಿ, ಫೋನ್ ಮೆಮೊರಿ ಬೂಸ್ಟ್ ಮಾಡುವುದಾಗಿ ಹೇಳುತ್ತದೆ. ಆದರೆ ಇದು ಯಾವುದೂ ಪರಿಣಾಮಕಾರಿಯಾಗಿರುವುದಿಲ್ಲ. ಫೋನ್ ಸುರಕ್ಷತೆ ದೃಷ್ಟಿಯಲ್ಲೂಈ ಆ್ಯಪ್ ಒಳ್ಳೆಯದಲ್ಲ.
ಇದಕ್ಕೆ ಬದಲು ಯಾವ ಆ್ಯಪ್ ಗಳು ಬಳಸಬಹುದು?: Greenify and Ccleaner

8. ಫಿಲ್ಡೊ ಮ್ಯೂಸಿಕ್ (Fildo Music)

ಇದೊಂದು ಮ್ಯೂಸಿಕ್ ಗೆ ಸಂಬಂಧಿಸಿದ ಆ್ಯಪ್. ಇದು ಹಿಂದೊಮ್ಮೆ ಸ್ಥಳೀಯ ಮ್ಯೂಸಿಕ್ ಪ್ಲೇಯರ್ ನಂತೆ ವೇಷ ಧರಿಸಿ ಅಕ್ರಮವಾಗಿ ಮ್ಯೂಸಿಕ್ ಡೌನ್ ಲೋಡ್ ಮಾಡುತ್ತಿದ್ದ ಆ್ಯಪ್ ಆಗಿತ್ತು. ಈ ಆ್ಯಪ್ ಕುರಿತು ದೂರುಗಳು ಕೇಳಿ ಬಂದಿದ್ದರಿಂದ ಇದು ಮ್ಯೂಸಿಕ್ ಡೌನ್ ಲೋಡ್ ಅನ್ನು ನಿಲ್ಲಿಸಿತ್ತು. ಈಗ ಇದು ಮ್ಯೂಸಿಕ್ ಮ್ಯಾನೇಜ್ಮೆಂಟ್ ಆ್ಯಪ್ ಎಂದು ಬದಲಾಗಿದೆ. 
ಇದಕ್ಕೆ ಬದಲು ಯಾವ ಆ್ಯಪ್ ಗಳು ಬಳಸಬಹುದು?: VLC (Free), AIMP (Free), Poweramp (Free)

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು